ಕನಕಮಜಲ: ಕನಕಮಜಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (PACS)ದ ಪ್ರಧಾನ ಕಚೇರಿ ಯಲ್ಲಿ ಇಂದು ಬೆಳಿಗ್ಗೆ ಲಕ್ಷ್ಮೀ ಪೂಜೆ ಹಾಗೂ ಗಣಹೋಮ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವದಿಂದ ನೆರವೇರಿತು.
ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಸುಧಾಕರ ಕಾಮತ್, ಉಪಾಧ್ಯಕ್ಷರಾದ ಶ್ರೀ ವೆಂಕಪ್ಪ ನಾಯ್ಕ, ಸಂಘದ ಕಾರ್ಯನಿರ್ವಹಣಾಧಿಕಾರಿ ಶ್ರೀ ಲೋಹಿತ್ ಕುಮಾರ್ ಹಾಗೂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸ್ವರೂಪ್ ಕಡಿಕಡ್ಕ ಉಪಸ್ಥಿತರಿದ್ದರು.
ಅಲ್ಲದೆ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಭಟ್, ಗಂಗಾಧರ ಗೌಡ ಕಾಳಮನೆ, ನಿರಂಜನ ಬೋಳಬೈಲು, ಕುಸುಮಾಧರ ಅರ್ಬಡ್ಕ, ವಿನುತಾ ಸರಕುಟೇಲು, ದಮಯಂತಿ ಲಿಂಗಪ್ಪ ಗೌಡ, ಸಂಘದ ಮಾಜಿ ಅಧ್ಯಕ್ಷರಾದ ನಾರಾಯಣ ಗೌಡ ಬೊಮ್ಮೆಟ್ಟಿ, ಹರೀಶ್ ಮೂರ್ಜೆ , ವಸಂತ ಗಬ್ಬಲಡ್ಕ , ಪಂಚಾಯತ್ ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ ಕುತ್ಯಾಳ ಸೇರಿದಂತೆ ಸಂಘದ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಧಾರ್ಮಿಕ ವಾತಾವರಣದಲ್ಲಿ ನೆರವೇರಿತು.
