ನವೆಂಬರ್ 14ರಂದು ಸಂತೆಕಟ್ಟೆಯ ಹೋಟೆಲ್ ಬೃಂದಾವನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 15ರಂದು ಸಹಕಾರ ಸಂಸ್ಥೆಗಳ ಕಂಪ್ಯೂಟರೀಕರಣ ಮತ್ತು ಡಿಜಿಟಲೀಕರಣದ ಕುರಿತು ಕಾರ್ಯಕ್ರಮವನ್ನು ಕೋಟೇಶ್ವರದಲ್ಲಿ ಆಯೋಜಿಸಲಾಗಿದೆ.
ನವೆಂಬರ್ 16ರಂದು ಸಹಕಾರ ಶಿಕ್ಷಣ ಮತ್ತು ತರಬೇತಿ, ನವೆಂಬರ್ 17ರಂದು ಮೌಲ್ಯವರ್ಧನೆ ಮತ್ತು ಬ್ರ್ಯಾಂಡ್ ನಿರ್ಮಾಣ, ನವೆಂಬರ್ 18ರಂದು ಸಾರ್ವಜನಿಕ ಮತ್ತು ಖಾಸಗಿ ಸಹಕಾರ ಪಾಲುದಾರಿಕೆ ಹಾಗೂ ನವೆಂಬರ್ 19ರಂದು ಮಹಿಳೆಯರು, ಯುವಜನರು ಮತ್ತು ಸಮಾಜದ ದುರ್ಬಲ ವರ್ಗಗಳ ಪಾಲ್ಗೊಳ್ಳುವಿಕೆ ಕುರಿತು ಕಾರ್ಯಕ್ರಮಗಳು ನಡೆಯಲಿವೆ.
ನವೆಂಬರ್ 20ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ರಾಜ್ಯಮಟ್ಟದ ಸಮಾರೋಪ ಸಮಾರಂಭ ನಡೆಯಲಿದೆ. ಪರಿಸರ ಸಂರಕ್ಷಣೆ, ಲಿಂಗ ಸಮಾನತೆ ಮತ್ತು ವಿಶ್ವಶಾಂತಿಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಈ ಸಮಾರಂಭದ ಮುಖ್ಯ ವಿಷಯವಾಗಿರಲಿದೆ.
